Tuesday, October 28, 2014

Honeyಗವನಗಳು - 3

ದೀಪಾವಳಿ 
ಡಂ ದುಡುಂ  ಸರಪಳಿ
ಎಲ್ಲ ಕಡೆ ಹೊಗೆ, ಸದ್ದಿನ ಹಾವಳಿ
ಬೇರೆಯವರಿಗೆ ತೊಂದರೆ ಆದರೇನಂತೆ

ಇದು ನಮ್ಮ ಸ್ಟೈಲ್ ದೀಪಾವಳಿ !!


ಪ್ರೀತಿ
ಅವನು ಇಡ್ಲಿ ಸಾಂಬಾರು
ಅವಳು ಪಿಜ್ಜಾ ಬರ್ಗರು 
ಆದರೂ ಚೆನ್ನಾಗೆ ನಡೆದಿತ್ತು ಪ್ರೀತಿ. 
ಯಾವಾಗ್ ಸಂಬಾರಿಗೆ ಬರ್ಗರ್ ನೆಂಚಿಕೊಂಡು ತಿಂದನೋ 
ಆಗಲೇ ಶುರುವಾಯ್ತು ಪಜೀತಿ !!

 ವಿಶ್ವ
ಅವಳ ಕಣ್ಣು ನಕ್ಷತ್ರ,
  ಮೊಗ ಚಂದಿರ ,
  ಅವಳೇ ನನ್ನ ವಿಶ್ವ ಅನ್ಕೊಂಡಿದ್ದೆ 
ಆದರೆ ಅವಳು 
ನನ್ನನ್ನೇ ನುಂಗೋ Blackhole ಅನ್ಕೊಂಡಿರಲಿಲ್ಲ !!

ಮಳೆ
ಅವಳ ಕಣ್ಣಂಚಿನ ಮಿಂಚಿಗೆ
ಅವನ ಎದೆ ನಡುಗಿತು , ಗುಡುಗಿತು
ಆಕಾಶವೇ ಖುಷಿಯಿಂದ ಕಂಬನಿ ಸುರಿಸಿತು !

ಫಾಸ್ಟ್ ಫುಡ್ 
ಅವಳು ಬಿಟ್ಟು ಹೋದ ಬೋಂಡ ಇನ್ನು ಬಿಸಿಯಾಗಿತ್ತು. 
ಆದರೆ ಅವಳ ಫೋನ್ ಆಗಲೇ ಬ್ಯುಸಿ ಆಗಿತ್ತು ;(


ನಾನವನಲ್ಲ
ಇಲ್ಲ
ಅವಳಿಗೆ ಮೋಸ ಮಾಡಿ
ಓಡಿ ಹೋದವ ಬೇರೆಯವ,
ನಾನವನಲ್ಲ.
ನಮ್ಮಿಬ್ಬರ ಪರಿಚಯ ಈಗ ತಾನೇ ಪ್ರೀತಿಗೆ ತಿರುಗಿದೆ.
ನಾ ನವ ನಲ್ಲ !!!

Fire Brigade
ಸಿಕ್ಕಾಪಟ್ಟೆ ತಿನ್ಬಿಟ್ಟೆ ಖಾರ
ಚಾಲೆಂಜ್ ಗೆ  ಅಂತ
ಶಾಮಕ ದಳವದರನ್ನ ಕರೆಯಿಸಿ
ಆಗಿದೆ ಹೊಟ್ಟೆಯೊಳಗೆ ಅಗ್ನಿ ದುರಂತ !!

ಜೀವನ 
ಜೀವನ ಮರ್ಮ
ಅರಿಯುವಷ್ಟರಲ್ಲಿ ಕೊಳೆತು ಹೋಯಿತು ಚರ್ಮ !!

ನಾವು ಒಳ್ಳೆಯವರೇ
We ಸ್ವಲ್ಪ ಜಾಸ್ತಿನೇ adjust ಮಾಡಿಂಗ್
Wen U Say ಸ್ವಲ್ಪ adjust ಮಾಡಿ.
But when U ppl no adjust ಮಾಡಿಂಗ್
ಆವಾಗಲೇ ಹೇಳೋದು  ಎತ್ರಿ ನಿಮ್ಮ ಗಾಡಿ !!

ಕವಿ
ನಾನೆಂದೆ ನಾನೊಬ್ಬ ಕವಿ
I write poetry 
ಅವಳೆಂದಳು 
ಪದಗಳು ಹಾಳೆ ಮಾತ್ರ ಮುಟ್ಟುತಿದೆ
 ಮನಸನಲ್ಲ 
ನೀವು ಅದೆಂತ poetರಿ ?

2 comments:

  1. Prothsahane kodaballe nimma kavyakke..
    Nimmanthavarindle ee jagathu nadithirodu...

    Prothsahane kodaballe nimma kavyakke..
    Nimmanthavarindle ee jagathu nadithirodu...




    Neevu bare kavana barita kulithaga,
    Naavu ooru udhara maadakk horatirodu...:-)

    Neevu bare kavana barita kulithaga,
    Naavu ooru udhara maadakk horatirodu...:-)

    ReplyDelete
  2. All are nice. Keep writing!!! :)

    ReplyDelete