Tuesday, October 28, 2014

Honeyಗವನಗಳು - 4



Honeyಗವನ

ನಾನು ಗದ್ಯವಾಗಿದ್ದೆ 
ಅವಳು ಪದ್ಯವಾಗಿದ್ದಳು 
ನಮ್ಮ ಸಂಕಲನ ಚೆನ್ನಾಗೆ ಇತ್ತು 
ಅದ್ಯಾರೋ ಬಂದು ಗೀಚಿದರು ರಗಳೆ 
ಕವನ ಓಡಿ ಹೋದಳು 
ನಾನು ಕಥೆಯಾದೆ !!



ವ್ಯತ್ಯಾಸ 
ನೀವು ಟೀ ಹತ್ರ ಹೋದ್ರೆ
ನೀವಿನ್ನೂ ನವನಟಿ
ಟೀ ನಿಮ್ಮ ಹತ್ರ ಬಂದ್ರೆ
ನೀವೀಗ celebrity !!

Surprise
ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು.
ಹೇಳದೆ ಬಂದಿದ್ದೆ ತಪ್ಪಾಯಿತು ಬಾಗಿಲಿಗೆ ಬೀಗ ಜಡಿದಿತ್ತು !!


ಸಣ್ಣ ಕಥೆ 
ಚೈತ್ರದ ಚಿಗುರು 
ಚಿಗುರಿದ ಮೀಸೆ 
ಮೀಸೆಯ ಮೋಸ 
ಮೋಸಕ್ಕೆ ಗೂಸ 
ಮಾದ ಲೂಸ 
ಮಾದ್ವಿ escape with ಪೈಸ 



 ದೀಪಾವಳಿ ಬಂಪರ್ ಸೇಲ್
ಯಾರ್ ಯಾರ್ ಆದ್ರಪ್ಪ flipkart ಇಂದ flopಉ
 ಯಾರ್ ಯಾರ್ ಆದ್ರಪ್ಪ ebayಯಿಂದ ಗೂಬೆ
 ಯಾರ್ ಯಾರ್ ಹಿಡಿದ್ರಪ್ಪ snapdealಇಂದ ಧೂಳು
 ಎಲ್ಲರು ಬಂದು ಹೇಳ್ಕೊಲ್ರಪ್ಪ ಗೋಳು


ಹುಡುಕಾಟ
ದುಂಬಿ ಹೂವನ್ನು ಅರಸುತ್ತ ಹೊರಟಿತು
ದಿಂಬು ಕನಸನ್ನ ..
ಬೂಂದಿ ಹೊಟ್ಟೆಯನ್ನು ಅರಸುತ್ತ ಹೊರಟಿತು
ಬಿಂದು ಮನಸನ್ನ

ಎಚ್ಚರ
" I " ಎಂಬ ಅಹಂ ದೂರವಿದ್ದಷ್ಟೂ ಒಳ್ಳೇದು.
 I ಇದ್ದರೆ chappale ( ಚಪ್ಪಾಳೆ) chappali (ಚಪ್ಪಲಿ ) ಆಗುತ್ತದೆ !!



ಮೋಕ್ಷ 
ಸಾದುಸಂತರು ಮಾಡುತ್ತಾರೆ
ಜಪತಪಗಳಿತ್ಯಾದಿ
ಸಿಗಲೆಂದು ಮೋಕ್ಷ
ನಾನೊಬ್ಬ ಸಾಮಾನ್ಯ
ಹೊಡೆದೊಂದು ಶಿಳ್ಳೆ
ಆಯಿತು ಕಪಾಳ ಮೋಕ್ಷ !!


iPhone 
ದಿನಾ ಪೀಡಿಸುತಿದ್ದ ಪತ್ನಿಗೆ
iPhone ಕೊಡಿಸಿದ Husbandಉ
ಯಾಕೋ ಗ್ರಹಚಾರ ಸರಿಯಿರಲಿಲ್ಲ
ಕೊಟ್ಟ ದಿನವೇ ಆಯಿತು ಫೋನ್ ಬೆಂಡು
ಈಗ ಆಕೆ ಎತ್ತುತ್ತಾಳೆ ಅವನ ಬೆಂಡು
ಪಾಪ ಗಂಡು

ಹುಡುಕಾಟ
ಹುಡುಕಿದೆ ಪ್ರೀತಿ
Bing , googleಇನಲಿ
ನಾ ಕೂರುವ ಕ್ಯುಬಿಕಲ್ಲಿನಲಿ
ಸಿಕ್ಕಿದು ಮಾತ್ರ ಅದು
ಮರ ಗಿಡ ಬಳ್ಳಿಯಲಿ
ನದಿ ದಡ ಕಲ್ಲಿನಲ್ಲಿ


 ಕೆಲಸ ಆಯಿತು 
ಆಯಿತು ಅವಳಿಗೆ match fixಉ
ಇನ್ನೇಕೆ ಸಣಕ್ಕಾಗೋ ಚಿಂತೆ
ಬಿಟ್ಟೇ ಬಿಟ್ಟಳು aerobicsಉ


ಪ್ರಶ್ನೆ
ಅವಳಿಗೆ ಪ್ರಶ್ನೆ ಕೇಳಿಯೇ ಬಿಟ್ಟೆ
ಅವಳು ಇಲ್ಲ ಅಂದಾಗ
ಕಾಲಿನ ಕೆಳಗೆ ಭೂಮಿಯೇ ತಿರುಗಿದಂತಾಯಿತು
ನಾ ಕೇಳಿದ್ದು
Free Wifi ಇದಿಯಾ ?


ಅಭಿಮಾನ 
ಕವನಕೊಬ್ಬ ಅಭಿಮಾನಿ
ಕಥೆಗೊಬ್ಬಳು ಫಿದಾ
ಪ್ರತಿ ಕಲಾಕಾರನಲ್ಲು
ಪ್ರೀತಿ ಹೀಗೆ ಇರಲಿ ಸದಾ

  
ಕೆಲಸದಾಕೆ
ಎದುರಿನ ಮನೆ ಕೆಲಸದ ಬಾಯಿ
 ಕೆಲಸಕ್ಕೆ ಅಂದಳು ಬೈ ಬೈ
ಅದಕ್ಕೆ ಬೆಳಿಗ್ಗೆಯಿಂದ ಆಂಟಿ
ಬಡ್ಕೊತಿದಾರೆ ಬಾಯಿ ಬಾಯಿ !!


0 Comments:

Post a Comment