Honeyಗವನ
ನಾನು ಗದ್ಯವಾಗಿದ್ದೆ
ಅವಳು ಪದ್ಯವಾಗಿದ್ದಳು
ನಮ್ಮ ಸಂಕಲನ ಚೆನ್ನಾಗೆ ಇತ್ತು
ಅದ್ಯಾರೋ ಬಂದು ಗೀಚಿದರು ರಗಳೆ
ಕವನ ಓಡಿ ಹೋದಳು
ನಾನು ಕಥೆಯಾದೆ !!
ನೀವು ಟೀ ಹತ್ರ
ಹೋದ್ರೆ
ನೀವಿನ್ನೂ ನವನಟಿ
ಟೀ ನಿಮ್ಮ ಹತ್ರ
ಬಂದ್ರೆ
ನೀವೀಗ celebrity
!!
Surprise
ರಾಯರು ಬಂದರು ಮಾವನ
ಮನೆಗೆ ರಾತ್ರಿಯಾಗಿತ್ತು.
ಹೇಳದೆ ಬಂದಿದ್ದೆ
ತಪ್ಪಾಯಿತು ಬಾಗಿಲಿಗೆ ಬೀಗ ಜಡಿದಿತ್ತು !!
ಚೈತ್ರದ ಚಿಗುರು
ಚಿಗುರಿದ ಮೀಸೆ
ಮೀಸೆಯ ಮೋಸ
ಮೋಸಕ್ಕೆ ಗೂಸ
ಮಾದ ಲೂಸ
ಮಾದ್ವಿ escape with ಪೈಸ
ಯಾರ್ ಯಾರ್
ಆದ್ರಪ್ಪ flipkart ಇಂದ flopಉ
ಯಾರ್ ಯಾರ್ ಆದ್ರಪ್ಪ ebayಯಿಂದ ಗೂಬೆ
ಯಾರ್ ಯಾರ್ ಹಿಡಿದ್ರಪ್ಪ snapdealಇಂದ ಧೂಳು
ಎಲ್ಲರು ಬಂದು ಹೇಳ್ಕೊಲ್ರಪ್ಪ ಗೋಳು
ಹುಡುಕಾಟ
ದುಂಬಿ ಹೂವನ್ನು
ಅರಸುತ್ತ ಹೊರಟಿತು
ದಿಂಬು ಕನಸನ್ನ ..
ಬೂಂದಿ
ಹೊಟ್ಟೆಯನ್ನು ಅರಸುತ್ತ ಹೊರಟಿತು
ಬಿಂದು ಮನಸನ್ನ
ಎಚ್ಚರ
" I " ಎಂಬ ಅಹಂ
ದೂರವಿದ್ದಷ್ಟೂ ಒಳ್ಳೇದು.
I ಇದ್ದರೆ chappale ( ಚಪ್ಪಾಳೆ) chappali (ಚಪ್ಪಲಿ ) ಆಗುತ್ತದೆ !!
ಸಾದುಸಂತರು
ಮಾಡುತ್ತಾರೆ
ಜಪತಪಗಳಿತ್ಯಾದಿ
ಸಿಗಲೆಂದು ಮೋಕ್ಷ
ನಾನೊಬ್ಬ ಸಾಮಾನ್ಯ
ಹೊಡೆದೊಂದು ಶಿಳ್ಳೆ
ಆಯಿತು ಕಪಾಳ ಮೋಕ್ಷ
!!
ದಿನಾ ಪೀಡಿಸುತಿದ್ದ
ಪತ್ನಿಗೆ
iPhone ಕೊಡಿಸಿದ Husbandಉ
ಯಾಕೋ ಗ್ರಹಚಾರ
ಸರಿಯಿರಲಿಲ್ಲ
ಕೊಟ್ಟ ದಿನವೇ
ಆಯಿತು ಫೋನ್ ಬೆಂಡು
ಈಗ ಆಕೆ
ಎತ್ತುತ್ತಾಳೆ ಅವನ ಬೆಂಡು
ಪಾಪ ಗಂಡು
ಹುಡುಕಾಟ
ಹುಡುಕಿದೆ ಪ್ರೀತಿ
Bing , googleಇನಲಿ
ನಾ ಕೂರುವ
ಕ್ಯುಬಿಕಲ್ಲಿನಲಿ
ಸಿಕ್ಕಿದು ಮಾತ್ರ
ಅದು
ಮರ ಗಿಡ ಬಳ್ಳಿಯಲಿ
ನದಿ ದಡ
ಕಲ್ಲಿನಲ್ಲಿ
ಆಯಿತು ಅವಳಿಗೆ match
fixಉ
ಇನ್ನೇಕೆ ಸಣಕ್ಕಾಗೋ
ಚಿಂತೆ
ಬಿಟ್ಟೇ ಬಿಟ್ಟಳು aerobicsಉ
ಅವಳಿಗೆ ಪ್ರಶ್ನೆ
ಕೇಳಿಯೇ ಬಿಟ್ಟೆ
ಅವಳು ಇಲ್ಲ ಅಂದಾಗ
ಕಾಲಿನ ಕೆಳಗೆ
ಭೂಮಿಯೇ ತಿರುಗಿದಂತಾಯಿತು
ನಾ ಕೇಳಿದ್ದು
Free Wifi ಇದಿಯಾ ?
ಕವನಕೊಬ್ಬ ಅಭಿಮಾನಿ
ಕಥೆಗೊಬ್ಬಳು ಫಿದಾ
ಪ್ರತಿ
ಕಲಾಕಾರನಲ್ಲು
ಪ್ರೀತಿ ಹೀಗೆ ಇರಲಿ
ಸದಾ
ಕೆಲಸದಾಕೆ
ಎದುರಿನ ಮನೆ ಕೆಲಸದ ಬಾಯಿ
ಕೆಲಸಕ್ಕೆ ಅಂದಳು ಬೈ ಬೈ
ಅದಕ್ಕೆ ಬೆಳಿಗ್ಗೆಯಿಂದ ಆಂಟಿ
ಬಡ್ಕೊತಿದಾರೆ ಬಾಯಿ ಬಾಯಿ !!