ಸನಿಹ
ಅವಳು ನನ್ನೆಡೆ ಬಂದಾಗ
ಕುಣಿದು ಕುಣಿದು ಎಬ್ಬಿಸಿದೆ ಧೂಳು,
ಆದರೆ ಬಿಟ್ಟು ಹೋದಾಗ
ಕಣ್ಣೀರಿಂದ ನಿಂತಲ್ಲೇ swimming poolಉ
ಟ್ರಾಫಿಕ್ ಜಾಮ್
( ಸರ್ವಜ್ಞರವರ ಕ್ಷಮೆ ಕೋರುತ್ತ...)
ಭೋರ್ಗರೆಯುವ ಮಳೆಯಿರಲು,
ರಸ್ತೆ ಕೊಚ್ಚೆ ರಾಡಿಯಾಗಿರಲು,
ಟ್ರಾಫಿಕ್ ಜಾಮಲ್ಲಿ ಸಿಕ್ಕಿ ಹಾಕಿಕೊಂಡರೆ
ನರಕಕ್ಕೆ ಕಿಚ್ಚು ಹಚ್ಚೆಂದ ಅಲ್ಪಜ್ಞ್ಯ
ಬಡವ
ಉಳ್ಳವರು bikeಅಲ್ಲಿ ಹೊರಟರು ,
ನಾನೇನು ಮಾಡಲಿ ಬಡವನಯ್ಯ
ಎನಗೆ ಕಾಲೇ ಚಕ್ರ , Cabಗಳೇ ರಥ ,
BMTC ನೆ ಪುಷ್ಪಕವಿಮಾನವಯ್ಯ !!
ಬೆಳಕು
ಅವಳನ್ನು ನನ್ನ ನೆರಳಿನಡಿಯಲ್ಲೇ ಕಾಪಾಡಬೇಕು ಅಂತ ಇದ್ದೆ.
ಆಗಲಿಲ್ಲ.
ಅವಳೇ ಬೆಳಕಾಗಿದ್ದಳು !!
ಕರಗಿದ್ದು ಅವಳ ಕೆಂಗಣ್ಣಿಗೆ ಗುರಿಯಾದಾಗಲೇ
ಅವಳು ಕಾಂಗ್ರೆಸ್ ಅನ್ನೇ ಹಾಕಿದಳು .
ನನ್ನ ಕೆನ್ನೆ ಮೇಲೆ :)
ಕಣ್ಣು
ಅವಳನ್ನು ನೋಡಿದಾಕ್ಷಣ ಮಂಜುಗಡ್ಡೆಯಾದೆ ,ಕರಗಿದ್ದು ಅವಳ ಕೆಂಗಣ್ಣಿಗೆ ಗುರಿಯಾದಾಗಲೇ
ಮತದಾನ
ಮುಡಿಗೆ ಏರಿಸಲು ಮಲ್ಲಿಗೆಗೆ ಮತ ಹಾಕುವುದರ ಬದಲು ಕಮಲಕ್ಕೆ ಹಾಕಬೇಕಾಗಿತ್ತು ಅಂದೆ.ಅವಳು ಕಾಂಗ್ರೆಸ್ ಅನ್ನೇ ಹಾಕಿದಳು .
ನನ್ನ ಕೆನ್ನೆ ಮೇಲೆ :)
ಮದುವೆ
ಈಗಲೇ ಮದುವೆ ಬೇಡ
ಸ್ವಲ್ಪ ತಾಳಿ , ಭಾಗ್ಯ
ಶೀಘ್ರದಲ್ಲೇ ಬರಲಿದೆ
ಸರ್ಕಾರದಿಂದ ತಾಳಿಭಾಗ್ಯ !!
ವರದಕ್ಷಿಣೆ
ಅವಳೇನೋ ಪುಟ್ಟ ಗೌರಿ
ಆದರೆ ಅವಳ ಮದುವೆಗೂ ಕೊಡಬೇಕಾಯಿತು
Dowry !!
ಎಲೆ
ಬಾಳೆ ಎಲೆ ಹಾಕುವಾಗ ನೋಡಿದ ಎಳೆ ಬಾಲೆಗೆ ನಾ ಶರಣಾದೆ !!