ಸಿಡಿದಿದ್ದಳು,
ಹುಸಿಮುನಿಸಿನಿಂದ ಕೆನ್ನೆ ಕೆಂಪೇರಿತ್ತು.
ನಾಚಿದ್ದಳು
ಕಾಲ್ಬೆರಳಲ್ಲಿ ಗುಂಡಿ ತೋಡುತ್ತ
ಪರದೆಯ ಹಿಂದೆ ನಿಂತು
ಕದ್ದು ಕದ್ದು ನೋಡುತಿದ್ದಳು.
ನಸುನಕ್ಕಿ ಬಾ ಎಂದೆ.
ಹೆಜ್ಜೆ ಮೇಲೊಂದು ಹೆಜ್ಜೆ ಹಾಕುತ್ತ
ಅವಿತಿದ್ದ ಮುಸುಕಿನಿಂದ ಆಚೆ ಬಂದಳು
ನನ್ನ ಇಂದಿರಾ ಇಂದು
ಪೂರ್ಣ ಚಂದಿರನಂತೆ
ಕಂಗೊಳಿಸುತಿದ್ದಳು