Tuesday, September 30, 2014

Honeyಗವನಗಳು - 2

ಬತ್ತಿ
ಆತ ಇಟ್ಟ ಬತ್ತಿ .
ನನ್ನ ಜೀವನವೇ ಉರಿಯಿತು ಹೊತ್ತಿ !!


ಹೀಗಿರಬೇಕು 
ಕಥೆ ಚಿಕ್ಕದಾಗಿರಬೇಕು
ಕವನ ಚೊಕ್ಕವಾಗಿರಬೇಕು
ಹೃದಯ ಪುಟ್ಟದಾಗಿದ್ದರೂ
ಮನಸ್ಸು ಪಕ್ವವಾಗಿರ್ಬೇಕು

ಒಂದಾದಾಗ
 (Dedicated to my fnd who got engaged after nine yrs of meeting each other)
ನಡೆದಿತ್ತು ಅವಳಿಗೂ ನನಗೂ
ಒಂಬತ್ತು ವರ್ಷಗಳ ಕಾಲ ಮಾತು !
ಒಂಬತ್ತೇ ನಿಮಿಷ ಸುಮ್ಮನಾದೆವು,
ಈಗ ಮೌನದ್ದೇ ಹುಕೂಮತ್ತು
ನಮಗಿಂದು ಅರ್ಥವಾಯಿತು
ಮನಸ್ಸು ಒಂದೇ ಆಗಿದ್ದಾಗ
ಇಲ್ಲ ಮಾತಿನ ಜರೂರತ್ತು


ಪಂಚ್ ಡೈಲಾಗ್ 
ಚಲನಚಿತ್ರದಲ್ಲಿ ಇಂಚ್ ಇಂಚಲ್ಲು ಪಂಚ್ ಡೈಲಾಗ್ ಇರಬೇಕಾಗಿಲ್ಲ
ಕೊಂಚ್ ಕೊಂಚ್ ವಾಗಿ ನೆಂಚ್ಕೊಲ್ಲೋಕೆ ಇದ್ರೂ ಸಾಕು :)


Communication Gap 
ಅವಳೆಂದಳು ನಾನು ನೋಡಬೇಕು ಹೂ ಬಳ್ಳಿ
ಬಸ್ಸು ಹತ್ತಿಸಿದೆ, ಕರ್ಕೊಂಡು ಹೋದೆ
ತೋರಿಸಿದೆ ಅವಳಿಗೆ ಹುಬ್ಬಳ್ಳಿ !!


ಅವಳಿ-ಜವಳಿ ! 
ಕೊಡಿಸೋಕ್ಕೆ ಹೋಗಿದ್ದ ಅವಳಿಗೆ ಜವಳಿ ,
ಕೊಟ್ಟೇಬಿಟ್ಟ  ಅವಳಿ-ಜವಳಿ !!

 ಜಸ್ವಂತಿ
ಗಿಜಿ ಗಿಜಿ ಬಜಾರಿನಲ್ಲಿ ಜಸ್ವಂತಿ
 ಕುಳಿತಿದ್ದಳು ಒಂಟಿ
ಸಂಗಾತಿಯೇನು ಬೇಕಾಗಿರಲಿಲ್ಲ ಅವಳಿಗೆ
ಬೇಕಾಗಿದ್ದು just one tea ;)

 ಒರಟನಲ್ಲ
ಮುಖ ಊದಿಸಿಕೊಂಡಳು ,
ನಾ ಕದಲಲಿಲ್ಲ ,
 ಕಣ್ಣಲ್ಲಿ ನೀರು ಕಂಡೆ
ಒರೆಸಲಿಲ್ಲ
ನಾನು ಒರಟನಲ್ಲ,
 ಅವಳು ಪಾನಿಪೂರಿ ತಿನ್ನುವಾಗ ತೊಂದರೆ ಕೊಡುವುದಿಲ್ಲ ಅಷ್ಟೇ !

Unlucky
ಹಾರುತಿತ್ತು ಹಕ್ಕಿ
ಕೊಂದ ಗುಂಡಿಕ್ಕಿ
ಗಾಡಿ ಓಡಿಸುವ techie
ಹೊಡೆದು ಅದಕ್ಕೆ ಡಿಕ್ಕಿ
ಆದಳು unlucky

There was once a hunter
who wanted some fun and laughter
But he was alone
His friends were all gone
Thats why he resorted to twitter !!


 ಶುಭರಾತ್ರಿ 
ರಾತ್ರಿಯಾಯಿತು
ಕಣ್ಪದರಗಳು ಕಣ್ಣ ಗುಡ್ಡೆಯ ಮೇಲೆ ಸೇರಿ 
ಪರಸ್ಪರ ಮುತ್ತಿಡುವ ಕಾಲ ಬಂದಿತು. 
ನಾವ್ ಯಾಕೆ ತೊಂದರೆ ಕೊಡೋಣ
ಮಲ್ಕೊಳೋಣ . 
ಶುಭರಾತ್ರಿ !

ಲೈಕ್
status ಲಾಯಕ್ಕಾಗಿದ್ರೆ  likeಗಳು ಜಾಸ್ತಿ.
ಇಲ್ಲಾಂದ್ರೆ ಮೂಸೋವ್ರೂ ನಾಸ್ತಿ :)


ಮಳೆ 
The drop has reached the earth,
The glass has lost its shine,
The leaf has breathed its last
The coir has lost its spine.
But then they did not mind
To pose for this picture of mine !!

ಜೋಕೆ
ಗೆಳೆತನ ಮಾಡುವಾಗ ಇರಲಿ ಸ್ವಲ್ಪ ಜೋಕೆ.
ಇಲ್ಲದಿದ್ದರೆ ನಿಮ್ಮ ಜೀವನವು jokeಕೆ !!

Accident Site 
ಸಹಾಯಕ್ಕೆ ಬಂದ ನಾರಿ
Selfie ತೆಗೆದು ಪರಾರಿ !!


ಭೇಟಿ
ಮತ್ತೆ ನನ್ನ ಭೇಟಿಯಾಗಬೇಡ ಎಂದವಳು
ಮತ್ತೆ ಸಿಕ್ಕಳು
ಪ್ರಪಂಚ ಚಿಕ್ಕದಾಗಿರಲಿಲ್ಲ
ಚಿಕ್ಕದಾಗಿದಿದ್ದು ಅವಳ ಪರ್ಸು :)

ಉಸಿರಾಗುವೆ ! 
ನೀ ಕಮಲವಾಗಳು ,ನಾ ಕೆಸರಾಗುವೆ
ನೀ ಎಳೆ ಎಲೆಯಾಗಳು, ನಾ ಹಸಿರಾಗುವೆ
ನೆರಳಾಗುವೆ, ಹಿಡಿದು ನಡೆಸುವ ಬೆರಳಾಗುವೆ,
ಬದುಕಿರುವ ತನಕ ನಿನ್ನ ಉಸಿರಾಗುವೆ !!

Fill in the blanks 
ಬೇಸರವಾಗಿ ದಿನ ದಿನದ ಜೀವನ ಯುದ್ಧ
ಆಗಲು ಹೊರಟಿದ್ದೆ ನಾನೂ ಬುದ್ಧ
-------- ಲೇ ಅರಿತಿದ್ದು
ಅಯ್ಯೋ ರಾಮ ನಾನೆಂತ ಪೆದ್ದ !!

ಸ್ಟೈಲು
ಮಾಡ್ರನ್ ಲೇಡಿಯಾದರೂ
ತಲೆ ತಗ್ಗಿಸಿಕೊಂಡೆ ನಡೆಯುವುದು
ಹುಡುಗಿಯರ ಸ್ಟೈಲು.
ಸಂಸ್ಕಾರ ಕೆಲವರ ಕಾರಣ
ಕೆಲವರಿಗೆ ಕಾರಣ ಮೊಬೈಲು

Bagmane Tech park
Morning morning ofc work,
ಹೋಗು Bagmane ಕಡೆಗೆ
as soon as its evening
Bhaag Mane ಕಡೆಗೆ !!


Manyata Tech Park 
ಬೆಳಗಾಗ್ತಿದ್ದಂಗೆ ಎದ್ನೋ ಬಿದ್ನೋ ಓಡು
 ತಲುಪಬೇಕು Manyata.
ಸಾಯಂಕಾಲ ಆಗ್ತಿದ್ದಂಗೆ ಎದ್ನೋ ಬಿದ್ನೋ
ಓಡು ಪ್ರಯಾಣ ಮನೆಯತ್ತ !! 

BangaloreRains
ಬಿರುಗಾಳಿ ಮಳೆ ಸುರಿಯಲು
ರಸ್ತೆಯೇ ನದಿಯಾಗಲು,
ನಾನೇ ಮೀನಾದೆ
ನೀರಲ್ಲಿ ಒಂದಾದೆ
ಈಜಿ ಮನೆ ಸೇರಿದೆ ! 

 ಇಂದ್ರ-ಚಂದ್ರ 

ಮೋಡ ಅಲ್ಲಿ ಮೂಡಿದರೆ 
ನವಿಲು ಇಲ್ಲಿ ಕುಣಿಯಿತು 
ನೀರು ನೆಲದಿ ಸುರಿಯಲು 
ಬಿಲ್ಲು ಬಾನಲಿ ಮೂಡಿತು 
ಎಲ್ಲೋ ಹೊಡೆದ ಬಾಣ 
ಯಾರದೋ ಹೋಯ್ತು ಪ್ರಾಣ 
ಇದೇ ಮಿಥ್ಯ ಜೀವನ 
ಇದೇ ಸತ್ಯ ಮರಣ