ಆಕೆ ಅಪರಾಧಿ. ಆಕೆ ಈತನ ಹೃದಯ ಕದ್ದಿದ್ದಳು . ಆಕೆ ಕಳ್ಳಿ . ಈತ ಕೋಪಗೊಂಡ. ಹುಸಿಗೋಪಗೊಂಡ. ಆಕೆ ಮತೊಮ್ಮೆ ಸಿಕ್ಕಾಗ ಕಣ್ಣು ಹೊಡೆದ .ಆಕೆಗೆ ಆಘಾತವಾಯಿತು. ಕೂಡಲೇ ಚಪ್ಪಲಿಯಿಂದ ತಿರುಗೇಟು ನೀಡಿದಳು .ಈತ ಸುಮ್ಮನಿರಲಿಲ್ಲ .ಸರಿಯಾದ ಸಮಯಕ್ಕೆ ಕಾದ.ಸಂದರ್ಭ ಬಂದೊಡನೆ ಪ್ರೀತಿಯ ಹೂಬಾಣದಿಂದ ದಾಳಿ ಮಾಡಿದ .ಗಾಯಗೊಂಡರೂ ಅವಳು ಅದೇ ಪ್ರೀತಿಯಿಂದ ಮಾಡಿದ ಬಲೆ ಬೀಸಿದಳು .ಆತ ಸೆರೆಯಾದ...